ನಿರಂಜನ್ ಜ್ಯೋತಿ (ಜನನ ೧ ಮಾರ್ಚ್ ೧೯೬೭), ಸಾಮಾನ್ಯವಾಗಿ ಸಾಧ್ವಿ ನಿರಂಜನ್ ಜ್ಯೋತಿ ಎಂದು ಇವರನ್ನು ಕರೆಯಲಾಗುತ್ತದೆ. ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಭಾರತೀಯ ಮಹಿಳಾ ರಾಜಕಾರಣಿ. ಅವರು ನವೆಂಬರ್ ೨೦೧೪ ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರಾಗಿ ನೇಮಕಗೊಂಡರು. ೩೦ ಮೇ ೨೦೧೯ ರಂದು, ಅವರು ನರೇಂದ್ರ ಮೋದಿ ೨೦೧೯ ಕ್ಯಾಬಿನೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು. ಅವರು ೨೦೧೪ ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆಯಲ್ಲಿ ಉತ್ತರ ಪ್ರದೇಶದ ಫತೇಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. ಅವರು ೨೦೧೨ರ ಚುನಾವಣೆಯಲ್ಲಿ ಗೆದ್ದ ನಂತರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಹಮೀರ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದರು. == ಜೀವನ ಮತ್ತು ವೃತ್ತಿ == ನಿರಂಜನ್ ಜ್ಯೋತಿ ಅವರು ಮಾರ್ಚ್ ೧, ೧೯೬೭ ರಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಪಟೇವ್ರಾ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಅಚ್ಯುತಾನಂದ ಮತ್ತು ತಾಯಿ ಶಿವ ಕಾಳಿ ದೇವಿ. ಅವರು ನಿಶಾದ್ -ಜಾತಿ ಕುಟುಂಬದಲ್ಲಿ ಜನಿಸಿದರು. ೧೪ ಜೂನ್ ೨೦೧೪ ರಂದು, ಲಕ್ನೋದ ಆವಾಸ್ ವಿಕಾಸ್ ಕಾಲೋನಿಯಲ್ಲಿ ನಡೆದ ಸಮಾರಂಭದಲ್ಲಿ ಜ್ಯೋತಿ ವಾಪಸಾಗುತ್ತಿದ್ದಾಗ ಭಾನು ಪಟೇಲ್ ಮತ್ತು ಅವರ ಮೂವರು ಸಹಚರರು ಜ್ಯೋತಿ ಮೇಲೆ ಗುಂಡು ಹಾರಿಸಿದರು. ಅವರು ಪ್ರಾಣಾಪಾಯದಿಂದ ಪಾರಾದರು. ಆದರೆ ಆಕೆಯ ಅಂಗರಕ್ಷಕ ಗಾಯಗೊಂಡಿದ್ದರು.. ಮೇ ೨೦೧೯ರಲ್ಲಿ, ಜ್ಯೋತಿ ಅವರು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾದರು. == ವೈಯಕ್ತಿಕ ಅಭಿಪ್ರಾಯಗಳು ಮತ್ತು ವಿವಾದಗಳು == ೧ ಡಿಸೆಂಬರ್ ೨೦೧೪ ರಂದು, ಅವರು ಸಾರ್ವಜನಿಕ ರ‍್ಯಾಲಿಯಲ್ಲಿ, "ದೆಹಲಿಯಲ್ಲಿ ಸರ್ಕಾರವನ್ನು ರಾಮ (ರಾಮಜಾದೆ) ಅಥವಾ ಕಿಡಿಗೇಡಿಗಳು (ಹರಾಮಜಾದೆ) ನಡೆಸುತ್ತಾರೆಯೇ ಎಂದು ನೀವು ನಿರ್ಧರಿಸಬೇಕು" ಎಂದು ಪ್ರತಿಪಕ್ಷದ ನಾಯಕನನ್ನು ಉಲ್ಲೇಖಿಸಿ ಹೇಳಿದರು. ಈ ಹೇಳಿಕೆ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು. ನಂತರ ಅವರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಲು ಮುಂದಾದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಭಾರತದ ಸಂಸತ್ತಿನ ವೆಬ್‌ಸೈಟ್‌ನಲ್ಲಿ ಅಧಿಕೃತ ಜೀವನಚರಿತ್ರೆಯ ರೇಖಾಚಿತ್ರ